ಈ ಪುಸ್ತಕದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ
ಜಾಣಗೆರೆ ವೆಂಕಟರಾಮಯ್ಯ
ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಗಳೆರಡರಲ್ಲೂ ಬರವಣಿಗೆ ಕೃಷಿ ಮಾಡುತ್ತಾ ಬಂದಿರುವ ಜಾಣಗೆರೆಯವರು ಕತೆ, ಕಾದಂಬರಿ, ಇತಿಹಾಸ ಕಥನ, ಜೀವನ ಸಂಕಥನ, ಪ್ರವಾಸ ಕಥನ, ವಿಚಾರ ಮಂಥನ ಮುಂತಾದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಈಗಾಗಲೇ ಸುಮಾರು 40 ಕೃತಿಗಳನ್ನು ಪ್ರಕಟಿಸಿದ್ದಾರೆ.
ಸಾಹಿತ್ಯ ಕೃಷಿಗಾಗಿ 2012ರಲ್ಲಿ ಕರ್ನಾಟಕ ಸರ್ಕಾರದಿಂದ 'ರಾಜ್ಯೋತ್ಸವ ಪ್ರಶಸ್ತಿ' ಸಂದಾಯವಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 'ಮಹಾನದಿ' ಮತ್ತು 'ಮಹಾಯಾನ' ಕೃತಿಗಳಿಗೆ ಉತ್ತಮ ಕಾದಂಬರಿ ಬಹುಮಾನಗಳು ಲಭಿಸಿವೆ. ಕನ್ನಡ ಪುಸ್ತಕ ಪ್ರಾಧಿಕಾರದಿಂದ 'ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ' ಬಂದಿದೆ. ಅದರ ಜೊತೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 'ಗೌರವ ಪ್ರಶಸ್ತಿ' ಸಂದಿದೆ.
ಪತ್ರಿಕೋದ್ಯಮ ಕೃಷಿಗಾಗಿ ಮೈಸೂರಿನ 'ಹೆಚ್.ಕೆ. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ', 'ಮಹಾನದಿ' ಕಾದಂಬರಿಗೆ ತುಮಕೂರಿನ 'ವೀಚಿ ಸಾಹಿತ್ಯ ಪ್ರಶಸ್ತಿ', 'ಜೀವಜಲ' ಕಾದಂಬರಿಗೆ ನಾಡೋಜ ಡಾ. ಬರಗೂರು ಪ್ರತಿಷ್ಠಾನದಿಂದ 'ಶ್ರೀಮತಿ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ', 'ಜಲಯುದ್ಧ' ಕಾದಂಬರಿಗೆ 'ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ'ಗಳ ಜೊತೆಗೆ ಬೆಂಗಳೂರಿನ ಕನ್ನಡ ಜನಶಕ್ತಿ ಸಂಘಟನೆಯಿಂದ 'ಶಾಂತವೇರಿ ಗೋಪಾಲಗೌಡ ಪ್ರಶಸ್ತಿ', ಅರಸು ವಿಚಾರ ವೇದಿಕೆಯಿಂದ 'ಅರಸುತ್ತಿ ಪ್ರಶಸ್ತಿ', ಕಟ್ಟೆ ಬಳಗದಿಂದ 'ಕನ್ನಡ ಕಟ್ಟೆ ಪ್ರಶಸ್ತಿ', ಮಂಡ್ಯದ 'ಇಂಡುವಾಳು ಹೆಚ್. ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿ' ಮತ್ತು ಬಿಎಂಶ್ರೀ ಪ್ರತಿಷ್ಠಾನದಿಂದ 'ವಿ. ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ', ಕಸಾಪದಿಂದ 'ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ', ಕರಾರಸಾಸಂ ಕನ್ನಡ ಕ್ರಿಯಾ ಸಮಿತಿಯಿಂದ 'ಕರ್ನಾಟಕ ಚೂಡಾಮಣಿ ಪ್ರಶಸ್ತಿ' ಹಾಗೂ ಕುವೆಂಪು ಕಲಾನಿಕೇತನದಿಂದ 'ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ' ಮುಂತಾದವು ಬಂದಿವೆ.
'ಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡ' ಕೃತಿಯು ಹಲವು ಮುದ್ರಣಗಳನ್ನು ಕಂಡಿದ್ದಲ್ಲದೆ, ರೇಡಿಯೋ ರೂಪಕ ನಾಟಕವಾಗಿ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ 20 ಕಂತುಗಳಲ್ಲಿ ಪ್ರಸಾರವಾಗಿದೆ.
ಈಗ ಇವರ 41ನೇ ಕೃತಿಯಾಗಿ 'ಅರ್ಥವಾಗದ ಲೋಕ' ಎಂಬ ಆತ್ಮಕಥನ ಪ್ರಕಟವಾಗುತ್ತಿದೆ.
ವಿಭಾಗ
Literature
ಪ್ರಕಟಣೆ ಹಂತ
ಭಾಷೆ
ಕನ್ನಡ
ರೇಟಿಂಗ್
5 / 5
ಕಲ್ಲೆ ಶಿವೋತ್ತಮ ರಾವ್ ಅವರು ಕನ್ನಡ ಪತ್ರಿಕೋದ್ಯಮದ ಹಿರಿಯರಲ್ಲಿ ಪ್ರಮುಖರು, ಹುಟ್ಟಿದ್ದು ಕ...
ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಕೊಪ್ಪಳದ ಶ್ರೀ ಗವಿಮಠ ಗವಿಸಿದ್ದೇಶ್ವರ ಸ್ವಾಮೀಜಿ ಅವರ ಲೇಖನಗಳ...
'ಗೌರವ ಛಲದೋಳ್ ದುರ್ಯೋಧನಂ' ಎಂದರೆ, ದುರ್ಯೋಧನ ಎಲ್ಲಾ, 'ಗುರಿಕಾರ ದೇವನಾಂಪ್ರಿಯ'ದ ಕಥನಾಯಕ...