ಶುಕ್ರವಾರ, ಜೂನ್ 19, 2026
Karnataka Rakshana Vedike Logo
ಲಾಗಿನ್ ಸದಸ್ಯರಾಗಿ

ಸ್ಥಾಪಕ ಅಧ್ಯಕ್ಷರ ಸಂದೇಶ

PDF ಡೌನ್‌ಲೋಡ್

ಕರ್ನಾಟಕ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರ ಆಲೋಚನೆಗಳು, ಭಾಷಣಗಳು ಮತ್ತು ಕನ್ನಡ ನಾಡಿಗಾಗಿ ಅವರ ದೃಷ್ಟಿಕೋನ.

ಜಾಣಗೆರೆ ವೆಂಕಟರಾಮಯ್ಯ
ಜಾಣಗೆರೆ ವೆಂಕಟರಾಮಯ್ಯ
ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರು
1999 ರಿಂದ
ಕನ್ನಡ ಅಸ್ಮಿತೆ ಕಾಯಕ

ಕನ್ನಡ ನಾಡಿನ
ಧ್ವನಿ

ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರು

ಲಂಕೇಶ್‌, ನಮ್ಮನಾಡು, ರೂಪಲೇಖಾ, ರೂಪಶಿಲ್ಪಿ ಪತ್ರಿಕೆಗಳಲ್ಲಿ ಸಹಾಯಕ ಸಂಪಾದಕರಾಗಿ ಮತ್ತು ಅಭಿಮಾನಿ, ಈ ಸಂಜೆ, ಅರಗಿಣಿ, ಮಾರ್ದನಿ, ಕರುನಾಡ ಸಂಜೆ, ಜಾಣಗೆರೆ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದವರು..., ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಗಳೆರಡರಲ್ಲೂ ಬರವಣಿಗೆ ಕೃಷಿ ಮಾಡುತ್ತಾ ಬಂದಿರುವ ಜಾಣಗೆರೆಯವರು ಕತೆ, ಕಾದಂಬರಿ, ಇತಿಹಾಸ ಕಥನ, ಜೀವನ ಸಂಕಥನ, ಪ್ರವಾಸ ಕಥನ, ವಿಚಾರ ಮಂಥನ ಮುಂತಾದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಈಗಾಗಲೇ ಸುಮಾರು 40 ಕೃತಿಗಳನ್ನು ಪ್ರಕಟಿಸಿದ್ದಾರೆ. ಸಾಹಿತ್ಯ ಕೃಷಿಗಾಗಿ 2012ರಲ್ಲಿ ಕರ್ನಾಟಕ ಸರ್ಕಾರದಿಂದ 'ರಾಜ್ಯೋತ್ಸವ ಪ್ರಶಸ್ತಿ' ಸಂದಾಯವಾಗಿದೆ ಕರ್ನಾಟಕ ಸಾಹಿತ್ಯ ಆಕಾಡೆಮಿಯಿಂದ 'ಮಹಾನದಿ' ಮತ್ತು 'ಮಹಾಯಾನ' ಕೃತಿಗಳಿಗೆ ಉತ್ತಮ ಕಾದಂಬರಿ ಬಹುಮಾನಗಳು ಲಭಿಸಿವೆ. ಕನ್ನಡ ಪುಸ್ತಕ ಪ್ರಾಧಿಕಾರದಿಂದ 'ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ' ಬಂದಿದೆ. ಅದರ ಜೊತೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 'ಗೌರವ ಪ್ರಶಸ್ತಿ' ಸಂದಿದೆ. ಪತ್ರಿಕೋದ್ಯಮ ಕೃಷಿಗಾಗಿ ಮೈಸೂರಿನ 'ಹೆಚ್.ಕೆ. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ', 'ಮಹಾನದಿ' ಕಾದಂಬರಿಗೆ ತುಮಕೂರಿನ 'ವೀಚಿ ಸಾಹಿತ್ಯ ಪ್ರಶಸ್ತಿ', 'ಜೀವಜಲ' ಕಾದಂಬರಿಗೆ ನಾಡೋಜ... Read more...

50+
ವರ್ಷಗಳ ಸೇವೆ
10k+
ಸದಸ್ಯರು
120+
ಹೋರಾಟಗಳು

ಎಲ್ಲ ಸಂದೇಶಗಳು

ಮನದಾಳದ ಮಾತುಗಳು / ಜಾಣಗೆರೆ ವೆಂಕಟರಾಮಯ್ಯ

ಕನ್ನಡದಲ್ಲಿ 'ಆತ್ಮ ಕಥನಗಳು ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟಗೊಂಡಿವೆ. ಅದರೆ ಎಲ್ಲರೂ ಆತ್ಮಕತೆಯನ್ನು ಬರೆದಿರುವುದಿಲ್ಲ. ಎಲ್ಲರಿಗೂ ಅದನ್ನು ಬರೆಯಬೇಕೆಂಬ ಜರೂರಹ ಕೂಡಾ ಬಂದಿರುವುದಿಲ್ಲ. ತಾವಂದುಕೊಂಡ ಎಲ್ಲ ಪ್ರಕಾರದ ಬರವಣಿಗೆ ಮಾಡಿ ಮುಗಿಸಿದ ಮೇಲೆ ಆತ್ಮಕಥೆ ದಾಖಲಿಸಬೇಕೆಂಬಾಸೆಯಿಂದ ಬರೆಯುವುದು ಸಹಜವಾಗಿದೆ. ಹಾಗೆ ಬರೆದಿದ್ದು ಕೂಡಾ ಬೇರೊಂದು ಪ್ರಕಾರವಾಗುತ್ತದೆಂದು ಭಾವಿಸಬಹುದು. ಆದರೆ ಬಹಳನು ಆತಕತೆ ಬರವಣಿಗೆಗಳು ಸಮಾಜಕ್ಕೆ, ಓದುಗರಿಗೆ ಲೇಖಕರ ಬೇರೊಂದು ಆಯಾಮದ ಅನುಭವ ಕಥನ ಸಿಕ್ಕೀತೆಂಬ ಬಾವನೆ ಕೂಡಾ ಇರುತದೆಂದು ಅರಿಯಬಹುದಾಗಿದೆ . ವಾಸ್ತವ ಆತ್ಮಕಥನ 'ಪೂರ್ಣ ಸತ್ಯ'ದ ದಾಖಲೆಯಾಗಿರುವುದಿಲ್ಲ ಎಂಬುದನು ಗಂಭೀರವಾಗಿ ಯೋಚಿಸಬೇಕಾಗಿರುವ ಸಂದರ್ಭವಿದಾಗಿದೆ. ತನ್ನ ಆತ್ಮದ ಕಥನವನ್ನು ಹೇಳಿಕೊಳ್ಳುವುದೆಂದರೆ ಎಲ್ಲವನ್ನೂ ಮುಕ್ತವಾಗಿ ಹೇಳಿಕೊಳ್ಳುವ ನೈಜ ಪ್ರಕ್ರಿಯೆಯಾಗಿರುತ್ತದೆ ಯಾವುದನ್ನೂ ಬಚ್ಚಿಡದೆ ಸತ್ಯ ಸಂಗತಿಗಳನ್ನು ದಾಖಲಿಸುವುದಕ್ಕೆ ಆತ್ಮಕಥನ'ವೆನ್ನಬಹುದು. ವಿಚಿತ್ರವೆಂದರೆ, ಪ್ರತಿಯೊಬ್ಬರ ಬದುಕಿನಲ್ಲೂ ಹೇಳಿಕೊಳ್ಳಲಾಗದ ಕೆಲವಾರು 'ಸಂಗತಿ'ಗಳು ಇದ್ದೇ ಇರುತ್ತವೆ. ಅವುಗಳಲ್ಲಿ ಎಲ್ಲವನ್ನೂ ಹಂಚಿಕೊಳ್ಳುವ ಪತ್ನಿಗೋ, ಪತಿಗೋ ಹೇಳಿಕೊಳ್ಳದ ತನ್ನಲ್ಲಿ ಅಡಗಿಸಿಕೊಂಡಿರುವ ಅನೇಕ ಉದಾಹರಣೆಗಳಿರುವುದು ಸಹಜವಾಗಿರುತ್ತದೆ. ಅಂತಹದನ್ನು ಕೂಡಾ 'ಆತ್ಮಕಥನ'ದಲ್ಲಿ ದಾಖಲಿಸದೆ ಹೋಗಿರುವುದೂ ಉಂಟು. ಈ ಬಹಳ ಓದುಗರು ಆತ್ಮಕಥನ'ವೆಂದರೆ ಸತ್ಯದ ದಾಖಲೆ ಎಂದೇ ನಂಬಿಕೊಂಡಿದ ಸಾಮಾನ್ಯವಾಗಿ ಆತ್ಮಕತೆಯ ಮೂಲಕ ಬಚ್ಚಿಟ್ಟುಕೊಂಡಿರಬಹುದಾದ ಗುಟ್ಟುಗಳನ್ನು ಕೂಡಾ ಬಹಿರಂಗವಾಗಿ ಬರೆದುಕೊಂಡು ಓದುಗರ ದೃಷ್ಟಿಯಲ್ಲಿ 'ಸಣ್ಣದವನಾಗಲು ಮಾಡಿ ಇಷ್ಟಪಡಲಾರರು. ಕೆಲವರಿಗೆ ಮಾತ್ರ ಅದು ಸಾಧ್ಯವಾಗಬಹುದು. ಗಾಂಧೀಜಿಯವರು 'ಆತ್ಮಕಥೆ'ಯನ್ನು ಬರೆದುಕೊಂಡು ಆ ಮೂಲಕ ನಿಜವಾದ ಮಹಾತ್ಮರನಿಸಿಕೊಂಡಿದ್ದಾರೆ. ಅವರು ತಮ್ಮ ಜೀವನದಲ್ಲಿ ಆಗಿಹೋದ ಪ್ರತಿಯೊಂದನ್ನೂ ಮುಕ್ತವಾಗಿ ಬರೆದುಕೊಂಡಿದ್ದು. ಮಹತ್ವದ ವಿಚಾರ. ಅದನ್ನು ವಿಶ್ವವೇ ಒಪ್ಪಿಕೊಂಡಿದೆ. ಆದರೂ ಆ ಸತ್ಯ ದಾಖಲೆಯನ ಹಿಡಿದುಕೊಂಡು 'ರಾಗದ್ವೇಷಿಗಳು' ಗಾಂಧೀಜಿಯನ್ನು ಟೀಕಿಸುವ ಅಸ್ತ್ರ ಮಾಡಿಕೊಳ್ಳುವ 'ಸಣ್ಣತನ'ವನ್ನೂ ಕಾಣಬಹುದಾಗಿದೆ. ಹಾಗಂತ 'ಸತ್ಯವನ್ನು ಬಚ್ಚಿಡದೆ ಬಿಚ್ಚಿಡುವುದು ಔಚಿತ್ಯಪೂರ್ಣ' ಅನ್ನಲೂಬಹುದು. ಆದರೆ ಎಲ್ಲರೂ ಗಾಂಧೀಜಿಯಾಗಲು ಸಾಧ್ಯವಾಗದು. ಅವರು ಆತ್ಮಕಥನ ಬರೆದ ಮೇಲೂ ಜೀವಂತವಾಗಿದ್ದರು. ಎಂದೆಂದಿಗೂ ಜೀವಂತವಾಗಿರಬಲ್ಲ ವ್ಯಕ್ತಿಯಾಗಿರುತ್ತಾರೆ. ಕೆಲವ ಸಾಧಕರು ತಮ್ಮ ಆತ್ಮಕಥನ ಬರೆಯುವ ಮೂಲಕ ಅಲ್ಲಿಗೇ ತಮ್ಮ ಸೃಜನಶೀಲತೆ-ಕಿಯಾಶೀಲತೆಗೆ ಮುಕ್ತಾಯ ಹಾಡಿಬಿಡುವುದುಂಟು. ಅದರೂ ಕೌಟುಂಬಿಕ ದೇವನ ಮುಂದುವರಿದಿರುತ್ತದೆ. ಕಥನದಲ್ಲಿ ದಾಖಲಿಸಿರುವ ಕೆಲವು 'ಸತ್ಯ'ಗಳಿಗೆ ಉತ್ತರದಾಯಿ ಆಗಿರುತ್ತಾರೆ ಅದು ಅವರ ಮುಂದಿನ ಬದುಕಿನಲ್ಲಿ ಸಮಸ್ಯೆ-ಸಂಕಷ್ಟ ತಂದಿಕ್ಕಬಹುದಾಗಿದೆ. ಅದಕ್ಕಾಗಿಯೇ ಎಲ್ಲ 'ಸತ್ಯ'ಗಳನ್ನೂ ಬರೆದುಕೊಳ್ಳಲು ಮುಂದಾಗುವುದಿಲ್ಲ. ಮುಂದುವರೆದಿದೆ........, ಅರ್ಥವಾಗದ ಲೋಕ ಜಾಣಗೆರೆ ಪತ್ರಿಕೆ ಪ್ರಕಾಶನ, #67, ಗಂಗಾಧರಪ್ಪ ಲೇಔಟ್, 5ನೇ ಕ್ರಾಸ್, ಪಾಪರೆಡ್ಡಿಪಾಳ್ಯ, ನಾಗರಬಾವಿ 2ನೇ ಹಂತ, -560072. Mob: 9343798078 Email: janagerev@gmail.com ಮೊದಲ ಮುದ್ರಣ :2026 ಪ್ರತಿಗಳು : 1000 ಪುಟಗಳು : xxiv +430-454 ಕಾಗದ ಬಳಕೆ: ಮ್ಯಾಪ್‌ಥೋ (80 ಜಿಎಸ್‌ಎಂ) ಮುಖಪುಟ ವಿನ್ಯಾಸ : ಅರುಣ್‌ ಕುಮಾ‌ರ್ ಹಕ್ಕುಗಳು: ಲೇಖಕರು Rs. 400-00

ಕನ್ನಡ ಚಳವಳಿ ಇತಿಹಾಸ : ಜಾಣಗೆರೆ ವೆಂಕಟರಾಮಯ್ಯ

ಚಳವಳಿಯಿಂದ ಗಟ್ಟಿ ಅನುಭವ...., ಕನ್ನಡ ಚಳವಳಿಯ ಇತಿಹಾಸವನ್ನು ಬರೆಯಬೇಕಾಗುತ್ತದೆಂಬ ಕಲ್ಪನೆಯೂ ನನಗಿರಲಿಲ್ಲ. ಒಂದು ಚಳವಳಿಯ ಇತಿಹಾಸ ಕುರಿತ ಬರವಣಿಗೆಯು ಸುಲಭದ್ದಲ್ಲ. ಅದರಲ್ಲೂ ಸಮಕಾಲೀನ ಚಳವಳಿ ಕುರಿತು ಬರೆಯುವುದು ಒಂದು ರೀತಿಯಲ್ಲಿ ದುಸಾಹಸದ ಕೆಲಸವಾಗುತದೆಂಬುದು ನನ್ನ ಭಾವನೆಯಾಗಿತ್ತು. ಆದರಿಂದಾಗಿ. ಆ ಬಗ್ಗೆ ಯೋಚಿಸಿಯೂ ಇರಲಿಲ್ಲ. ಅಂತಹ ಅವಕಾಶವೊಂದು ನನ್ನ ಪಾಲಿಗೆ ಬರುತ್ತದೆಂಬುದರ ಬಗ್ಗೆ ಕಲ್ಪನೆಯನ್ನೂ ಇಟ್ಟುಕೊಂಡಿರಲಿಲ್ಲ. ಆದರೂ, ಅರ್ಧ ಶತಮಾನ ತುಂಬಿರುವ ಕನ್ನಡ ಚಳವಳಿಯ ಇತಿಹಾಸ ಬರೆಯುವ ಕಾರ್ಯ ನನ್ನ ಹೆಗಲಿಗೆ ಬಿದ್ದಿತು. ತಕ್ಷಣ ಒಪ್ಪಿಗೆಯನ್ನೂ ಕೊಟ್ಟುಬಿಟ್ಟೆ.

ಧನ್ಯವಾದಗಳು!