ಈ ಪುಸ್ತಕದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ
ಕಲ್ಲೆ ಶಿವೋತ್ತಮ ರಾವ್ ಅವರು ಕನ್ನಡ ಪತ್ರಿಕೋದ್ಯಮದ ಹಿರಿಯರಲ್ಲಿ ಪ್ರಮುಖರು, ಹುಟ್ಟಿದ್ದು ಕಾರ್ಕಳ ಬಳಿಯ ಕಲ್ಯ ಗ್ರಾಮದಲ್ಲಿ, ಅದೇ ನಂತರ ಕಲ್ಲೆ ಆಗಿ ಅವರ ಹೆಸರಿನೊಂದಿಗೆ ಸೇರಿತು. ತಂದೆ ನಾರಾಯಣ ಕಲ್ಲೆ ಹಾಗೂ ಅವರ ತಂದೆ ಮೂಡ್ಲಿ ಮಂಜಪ್ಪನವರೂ ಸಹ ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಪತ್ರಕರ್ತರು ಹಾಗೂ ಬರಹಗಾರರಾಗಿದ್ದರು. ಇಪ್ಪತ್ತನೇ ಶತಮಾನದ ಮೊದಲಾರ್ಧದ ವಿದ್ಯಮಾನ ಅದು.
1930ರಲ್ಲಿ (29-08-1930) ಜನಿಸಿದ ಕಲ್ಲೆ ಶಿವೋತ್ತಮರಿಗೆ ತಮ್ಮ ಹದಿವಯಸ್ಸಿನಲ್ಲೇ ಓದಿನ ಗೀಳು. ಅದರಿಂದಾಗಿ ಬರೆಯುವ ಕಲೆ ರೂಢಿಸಿಕೊಂಡರು. ಅವರು ಬಹುಶಃ ಕಳೆದೊಂದು ದಶಕದಿಂದ ಮಾತ್ರ ಬರವಣಿಗೆ ಮಾಡಿಲ್ಲ. ಆದರೆ ಪುಸ್ತಕ ಪ್ರೀತಿ ಮುಂದುವರೆದಿದೆ. ಕಳೆದ ಏಳು ದಶಕಗಳಿಂದ ಅವರು ಬರೆಯುತ್ತಾ ಬಂದಿದ್ದಾರೆ. ಕನ್ನಡದ ಜನಪ್ರಿಯ ಟ್ಯಾಬ್ಲಾಯಿಡ್ ವಾರಪತ್ರಿಕೆಯಾಗಿದ್ದ 'ಜನಪ್ರಗತಿ'ಯೊಂದಿಗೆ 1960 ರಿಂದ 1990ರ ದಶಕದವರೆಗೂ ಸಂಪಾದಕರಾಗಿ ಹಾಗೂ ಕೊನೆಗೆ ಪತ್ರಿಕೆಯ ಮಾಲೀಕರೂ ಆಗಿ ನಡೆದು ಬಂದರು.
ವಿಭಾಗ
Literature
ಪ್ರಕಟಣೆ ಹಂತ
ಭಾಷೆ
ಕನ್ನಡ
ರೇಟಿಂಗ್
3 / 5
ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಕೊಪ್ಪಳದ ಶ್ರೀ ಗವಿಮಠ ಗವಿಸಿದ್ದೇಶ್ವರ ಸ್ವಾಮೀಜಿ ಅವರ ಲೇಖನಗಳ...
ಜಾಣಗೆರೆ ವೆಂಕಟರಾಮಯ್ಯ
ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಗಳೆರಡರಲ್ಲೂ ಬರವಣಿಗೆ...
'ಗೌರವ ಛಲದೋಳ್ ದುರ್ಯೋಧನಂ' ಎಂದರೆ, ದುರ್ಯೋಧನ ಎಲ್ಲಾ, 'ಗುರಿಕಾರ ದೇವನಾಂಪ್ರಿಯ'ದ ಕಥನಾಯಕ...