ಈ ಪುಸ್ತಕದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ
ಪ್ರಧಾನ ಸಂಪಾದಕರ ಮಾತು
ಪಾಲನೇತ್ರನ ಹೆಸರಿನ ಜೊತೆಗೆ ಕನ್ನಡ ಚಳವಳಿ ಅಭಿನ್ನವಾಗಿ ಸೇರಿಕೊಂಡುಬಿಟ್ಟಿರುವುದರಿಂದ ಧಾರ್ಮಿಕದಿಂದ ಹಿಡಿದು ಸಮಾಜಸೇವೆ ಯವರೆಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಆಪ್ತರೆಲ್ಲರೂ ಪ್ರೀತಿಯಿಂದ ಕರೆಯುವುದು ಮತ್ತು ಗುರುತಿಸುವುದು 'ಕನ್ನಡ ಚಳವಳಿ ಪಾಲನೇತ್ರ' ಎಂದೇ. ಇನ್ನೂ ಕೆಲವರ ಪಾಲಿಗೆ ಮಮತೆ, ಪ್ರೀತಿ, ಗೌರವ, ಅಭಿಮಾನ ಎಲ್ಲವೂ ತುಂಬಿಕೊಂಡು ಪಾಲನೇತ್ರ-ಪಾಲಣ್ಣ ಆಗಿರುವುದೂ ಉಂಟು. ಪಾಲಣ್ಣ ಎನ್ನುವುದಕ್ಕೆ ಜಾತಿ ಮತ ಪಂಥ ವರ್ಗ ಲಿಂಗ ಇತ್ಯಾದಿ ಯಾವ ತಾರತಮ್ಯವೂ ಇಲ್ಲ. ಪಾಲಣ್ಣ ನನ್ನ ಒಡನಾಟಕ್ಕೆ ಬಂದಾಗಿನಿಂದಲೂ ಗಮನಿಸುತ್ತಿದ್ದು, ಕನ್ನಡ ಚಳವಳಿಯನ್ನು ಪಾಲನೇತ್ರ ಇಷ್ಟೆಲ್ಲ ಹಚ್ಚಿಕೊಂಡಿದ್ದು ಮತ್ತು ಅಪ್ಪಿಕೊಂಡಿದ್ದು ಹೇಗೆ ಎಂದು ಆಲೋಚಿಸಿ, ಕೆಲವು ಉತ್ತರಗಳನ್ನು ಕಂಡುಕೊಂಡಿದ್ದುಂಟು.
ಪಾಲನೇತ್ರ ಅಭಿನಂದನಾ ಗ್ರಂಥ
ವಿಭಾಗ
Culture
ಪ್ರಕಟಣೆ ಹಂತ
ಭಾಷೆ
ಕನ್ನಡ
ರೇಟಿಂಗ್
5 / 5